ರಿಲಯನ್ಸ್ ನಿರ್ದೇಶಕರ ಮಂಡಳಿಗೆ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ನೇಮಕಕ್ಕೆ ಶಿಫಾರಸು

CITIZEN NEWS PUTTUR
By -
0

ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಇಶಾ ಅಂಬಾನಿ

ಮುಂಬೈ: ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಮಕ್ಕಳಾದ ಇಶಾ ಅಂಬಾನಿಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರನ್ನು ಕಂಪೆನಿಯ ಕಾರ್ಯ ನಿರ್ವಾಹಕಯೇತರ (ನಾನ್ ಎಕ್ಸಿಕ್ಯೂಟಿವ್ನಿರ್ದೇಶಕರನ್ನಾಗಿ ನೇಮಿಸಲು ಸೋಮವಾರ ನಡೆದ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್ನಿರ್ದೇಶಕರ ಮಂಡಳಿ ಶಿಫಾರಸು ಮಾಡಿದೆಮಾನವ ಸಂಪನ್ಮೂಲನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಿರುವ ಮಂಡಳಿ ಮೂವರ ನೇಮಕಾತಿಗಾಗಿ ಅನುಮೋದನೆ ನೀಡಲು ಶಿಫಾರಸು ಮುಂದಿಟ್ಟಿದೆಶೇರ್ ಹೋಲ್ಡರ್ಗಳ ಒಪ್ಪಿಗೆ ಬಳಿಕ ಅವರು ಅಧಿಕಾರ ಸ್ವೀಕರಿಸಿದ ದಿನಾಂಕದಿಂದ ನೇಮಕಾತಿಯು ಜಾರಿಗೆ ಬರಲಿದೆ.

ಭಾರತದ ಮೇಲೆ ರಿಲಯನ್ಸ್ ಫೌಂಡೇಷನ್ ಮತ್ತಷ್ಟು ದೊಡ್ಡ ಮಟ್ಟದ ಪರಿಣಾಮಉಂಟುಮಾಡಲು ಸಾಧ್ಯವಾಗುವಂತೆ ಬೆಳೆಸಲು ಹಾಗೂ ಮಾರ್ಗದರ್ಶನ ನೀಡಲುತಮ್ಮ ಉತ್ಸಾಹ ಹಾಗೂ ಸಮಯವನ್ನು ಮೀಸಲಿಡಲು ಬಯಸಿರುವ ನೀತಾ ಅಂಬಾನಿ ಅವರ ನಿರ್ಧಾರವನ್ನು ಗೌರವಿಸಿರುವ ನಿರ್ದೇಶಕರ ಮಂಡಳಿಯುಅವರ ರಾಜೀನಾಮೆಯನ್ನು ಸ್ವೀಕರಿಸಿದೆರಿಲಯನ್ಸ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷರಾಗಿ ನೀತಾ ಅಂಬಾನಿ ಅವರ ನಾಯಕತ್ವವನ್ನು ನಿರ್ದೇಶಕರ ಮಂಡಳಿ ಶ್ಲಾಘಿಸಿದೆ.


ರಿಲಯನ್ಸ್ ಫೌಂಡೇಷನ್ ನಿರ್ದೇಶಕರಾಗಿ ನೀತಾ ಅಂಬಾನಿ ಅವರು ಆರ್ಐಎಲ್ ಎಲ್ಲಾಮಂಡಳಿ ಸಭೆಗಳಲ್ಲಿ ಕಾಯಂ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆಇದರಿಂದ ಕಂಪನಿಯು ಅವರ ಸಲಹೆಗಳ ಪ್ರಯೋಜನ ಪಡೆಯುವುದನ್ನು ಮುಂದುವರಿಸಲು ನೆರವಾಗಲಿದೆ ಎಂದು ರಿಲಯನ್ಸ್ ಹೇಳಿಕೆ ತಿಳಿಸಿದೆ.

 

ರೀಟೇಲ್ಡಿಜಿಟಲ್ ಸೇವೆಗಳು ಮತ್ತು ಸರಕು ವ್ಯವಹಾರಗಳು ಸೇರಿದಂತೆ ಆರ್ಐಎಲ್ ಪ್ರಮುಖ ವ್ಯವಹಾರಗಳನ್ನು ಮುನ್ನಡೆಸುವ ಹಾಗೂ ನಿರ್ವಹಿಸುವ ಕಾರ್ಯದಲ್ಲಿ ಇಶಾ ಅಂಬಾನಿಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರು ಕಳೆದ ಕೆಲವು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆಆರ್ಐಎಲ್ ಪ್ರಮುಖ ಅಂಗ ಸಂಸ್ಥೆಗಳ ಮಂಡಳಿಗಳಲ್ಲಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆಆರ್ಐಎಲ್ ಮಂಡಳಿಗೆ ಅವರ ನೇಮಕಾತಿಯುಅವರ ದೃಷ್ಟಿಕೋನ ಮತ್ತು ಹೊಸ ಆಲೋಚನೆಗಳಿಂದ ಕಂಪೆನಿಯ ಉನ್ನತಿಗೆ ನೆರವಾಗಲಿದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.

Tags:

Post a Comment

0 Comments

Please Select Embedded Mode To show the Comment System.*

#buttons=(Ok, Go it!) #days=(20)

Our website uses cookies to enhance your experience. Check Out
Ok, Go it!