ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಗೆ ಅರ್ಜಿ ಆಹ್ವಾನ

CITIZEN NEWS PUTTUR
By -
0

 

ಮಂಗಳೂರು: ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ (Karnataka State Private Commercial Transport Workers Accident Benefit Scheme) ಯನ್ನು ನಿರ್ವಾಹಕರು ಮತ್ತು ಕ್ಲೀನರ್‌ಗಳಿಗೂ ಅನ್ವಯಿಸುವಂತೆ ಸರ್ಕಾರ ಜಾರಿಗೊಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ವಾಣಿಜ್ಯ ಸಾರಿಗೆ ವಾಹನಗಳ ನಿರ್ವಾಹಕರು, ಕ್ಲೀನರ್‌ಗಳು ಈ ಯೋಜನೆಯಡಿ ನೋಂದಣಿ ಮಾಡಿಸಬಹುದು.

ಯೋಜನೆಯ ಪ್ರಯೋಜನಗಳು: ಅಪಘಾತದಿಂದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‍ಗಳು ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ 5 ಲಕ್ಷ ರೂ.ಗಳ ಪರಿಹಾರ, ಶಾಶ್ವತ ದುರ್ಬಲತೆಗೆ 2 ಲಕ್ಷ ರೂ.ಗಳ ವರೆಗೆ ಪರಿಹಾರ. ತಾತ್ಕಾಲಿಕ ದುರ್ಬಲತೆಗೆ 50,000ರೂ. ನಿಂದ, 1ಲಕ್ಷ ರೂ.ಗಳ ವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿ.

ಶೈಕ್ಷಣಿಕ ಧನಸಹಾಯ: ಅಪಘಾತದ ಕಾರಣ ನಿಧನರಾದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗಳ ಇಬ್ಬರು ಮಕ್ಕಳಿಗೆ ಪದವಿಪೂರ್ವ ವ್ಯಾಸಾಂಗದವರೆಗೆ ವಾರ್ಷಿಕ 10,000ರೂ.ಗಳ ಶೈಕ್ಷಣಿಕ ಧನಸಹಾಯ.

ಈ ಯೋಜನೆಯಡಿ ಖಾಸಗಿ ವಾಣಿಜ್ಯ ವಾಹನದ ನಿರ್ವಾಹಕರು ಮತ್ತು ಕ್ಲೀನರ್‍ಗಳು ನೋಂದಣಿಯಾಗಲು 20ರಿಂದ 70 ವರ್ಷದೊಳಗಿರಬೇಕು. ಸ್ಟಾಂಪ್ ಸೈಜ್ ಫೋಟೊ 1, ಪಾಸ್ ಪೋರ್ಟ್ ಸೈಜ್ ಫೋಟೋ 1, ಆಧಾರ್ ಕಾರ್ಡ್, ಮಾರ್ಕ್ಸ್ ಕಾರ್ಡ್(ಎಸ್.ಎಸ್.ಎಲ್.ಸಿ)/ ಡಿ.ಎಲ್/ ಪಾನ್ ಕಾರ್ಡ್, ಬ್ಯಾಂಕ್ ಖಾತೆಯ ಪ್ರತಿ, ನಿರ್ವಾಹಕರ ಊರ್ಜಿತ ಪರವಾನಿಗೆ (ಸಾರಿಗೆ ಇಲಾಖೆಯಿಂದ ಪಡೆದಿರತಕ್ಕದ್ದು) (ನಿರ್ವಾಹಕರಿಗೆ ಮಾತ್ರ), ಸಂಸ್ಥೆ/ ಮಾಲೀಕರಿಂದ ನೀಡಲಾಗಿರುವ ಗುರುತಿನ ಚೀಟಿ(ಲಭ್ಯವಿದ್ದಲ್ಲಿ) ಈ ಎಲ್ಲಾ ದಾಖಲೆಯೊಂದಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಕಾರ್ಮಿಕ ಅಧಿಕಾರಿಯವರ ಕಚೇರಿ ಹಾಗೂ ಕಾರ್ಮಿಕ ನಿರೀಕ್ಷಕರುಗಳ ಕಚೇರಿ ದೂ.ಸಂಖ್ಯೆ:0824-2435343, 0824-2433132 ಅನ್ನು ಸಂಪರ್ಕಿಸುವಂತೆ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments

Please Select Embedded Mode To show the Comment System.*

#buttons=(Ok, Go it!) #days=(20)

Our website uses cookies to enhance your experience. Check Out
Ok, Go it!