ಮಂಗಳೂರು ಜಿಲ್ಲೆಯ ನ್ಯಾಯಾಲಯಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Monday, October 30, 2023
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಹಾಗೂ ಮಂಗಳೂರಿನ ಜಿಲ್ಲಾ ನ್ಯಾಯಾಲಯಗಳಲ್ಲಿ ಖಾಲಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಶೀಘ್ರ ಲಿಪಿಗಾರರು(10 ಹುದ್ದೆಗಳು, ಮೂಲವೇತನ ರೂ.27,650), ಬೆರಳಚ್ಚುಗಾರರು (6 ಹುದ್ದೆಗಳು, ಮೂಲವೇತನ ರೂ. 21,400), ಬೆರಳಚ್ಚು ನಕಲುಗಾರರು (2 ಹುದ್ದೆಗಳು, ಮೂಲವೇತನ ರೂ.21,400) ಹಾಗೂ ಜವಾನ (36 ಹುದ್ದೆಗಳು, ಮೂಲವೇತನ ರೂ. 17,000)ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ನ್ಯಾಯಾಲಯದ ವೆಬ್‍ಸೈಟ್ https://dk.dcourts.gov.in/notice-category/recruitments/ ನಲ್ಲಿ ನವೆಂಬರ್ 6ರಿಂದ ಡಿಸೆಂಬರ್ 5ರೊಳಗೆ ಸಲ್ಲಿಸಲು ಅವಕಾಶವಿರುತ್ತದೆ ಆನ್‍ಲೈನ್ ಮೂಲಕ ಶುಲ್ಕ ಪಾವತಿಸಲು ಡಿಸೆಂಬರ್ 6 ಕೊನೆಯ ದಿನ.
ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ಅನ್ನು ಪರಿಶೀಲಿಸಬಹುದು ಎಂದು ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.