ಪುತ್ತೂರು- ಕಡಬ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 10 ರಿಂದ ಸಂಜೆ 5.30ರ ತನಕ ಕರೆಂಟ್ ಇರಲ್ಲ

ಪುತ್ತೂರು- ಕಡಬ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 10 ರಿಂದ ಸಂಜೆ 5.30ರ ತನಕ ಕರೆಂಟ್ ಇರಲ್ಲ

 

ಪುತ್ತೂರು- ಕಡಬ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 10 ರಿಂದ ಸಂಜೆ 5.30ರ ತನಕ ಕರೆಂಟ್ ಇರಲ್ಲ 

ಪುತ್ತೂರು: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ)ಯು ತನ್ನ ವ್ಯಾಪ್ತಿಯ  ಪುತ್ತೂರು- ಕಡಬ ವಿದ್ಯುತ್‌ ಪೂರೈಕೆ ಜಾಲದಲ್ಲಿ ಇಂದು (ಜೂನ್ 13) ಬೆಳಗ್ಗೆ 10 ರಿಂದ ಸಂಜೆ 5.30ರ ತನಕ ವಿದ್ಯುತ್ ಕಡಿತಗೊಳಿಸುವುದಾಗಿ ಹೇಳಿದೆ. ತುರ್ತು ನಿರ್ವಹಣಾ ಕಾಮಗಾರಿ ಮತ್ತು ಇತರೆ ಕಾಮಗಾರಿ ಹಿನ್ನೆಲೆಯಲ್ಲಿ ಈ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ ಎಂದು ಅದು ಹೇಳಿದೆ. 

ಹೀಗಾಗಿ, ತುರ್ತು ನಿರ್ವಹಣಾ ಕಾಮಗಾರಿ ಮತ್ತು ಉಪ್ಪಿನಂಗಡಿ - ಪುತ್ತೂರು ಚತುಷ್ಪಥ ಮಾರ್ಗ ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ವಾಟರ್‌ಸಪ್ಪ, ಕಾಂಚನ ಮತ್ತು ಉಪ್ಪಿನಂಗಡಿ ಎಕ್ಸ್‌ಪ್ರೆಸ್‌ ಫೀಡರ್‌ನಲ್ಲಿ ಜೂ.13ರಂದು ಪೂರ್ವಾಹ್ನ 10 ರಿಂದ ಸಂಜೆ 5.30 ರ ತನಕ  ಹಾಗೂ 33 ಕೆವಿ ಪುತ್ತೂರು-ಕಡಬ ವಿದ್ಯುತ್ ಮಾರ್ಗದ ಮುಂಗಾರು ಪೂರ್ವ ಪಾಲನಾ ಕಾರ್ಯ ನಡೆಸಲಿರುವ ಕಾರಣ ಜೂ.13ರಂದು ಪೂರ್ವಾಹ್ನ 10 ರಿಂದ ಸಂಜೆ 5 ಗಂಟೆಯವರೆಗೆ 33 ಕೆವಿ ಪುತ್ತೂರು- ಕಡಬ ವಿದ್ಯುತ್‌ ಮಾರ್ಗದ ವಿದ್ಯುತ್ ನಿಲುಗಡೆಯಾಗಲಿದೆ. 

ಆದುದರಿಂದ, 110/33/11 ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ನೆಕ್ಕಿಲಾಡಿ ಮತ್ತು ಬಜತ್ತೂರು ಗ್ರಾಮದ ವಿದ್ಯುತ್ ಬಳಕೆದಾರರು ಹಾಗೂ 33/11 ಕೆವಿ ಕಡಬ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಿಂದ ವಿದ್ಯುತ್‌ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.   

Mescom updates Puttur Kadaba Scheduled Power cut today 

Keywords


MESCOM Updates, Puttur, Kadaba, Scheduled Power Cut, Power Outrage, ಮೆಸ್ಕಾಂ ಪ್ರಕಟಣೆ, ಮೆಸ್ಕಾಂ ಸುದ್ದಿ, ಪುತ್ತೂರು - ಕಡಬದಲ್ಲಿ ವಿದ್ಯುತ್ ಕಡಿತ, ಪುತ್ತೂರು ಕಡಬದಲ್ಲಿ ಕರೆಂಟ್ ಇಲ್ಲ

Ads on article

Advertise in articles 1

advertising articles 2

Advertise under the article