
ಪುತ್ತಿಲ ಪರಿವಾರ ಬೆಟ್ಟಂಪಾಡಿ ವತಿಯಿಂದ ರಕ್ತದಾನ ಶಿಬಿರ
ಪುತ್ತೂರು: ಪುತ್ತಿಲ ಪರಿವಾರ ಬೆಟ್ಟಂಪಾಡಿ ಹಾಗೂ ಪುತ್ತೂರಿನ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ವತಿಯಿಂದ ರಕ್ತದಾನ ಶಿಬಿರ ಆ.27ರಂದು ಗ್ರಾಮ ಪಂಚಾಯತ್ ಸಭಾಭವನ ಬೆಟ್ಟಂಪಾಡಿಯಲ್ಲಿ ಜರಗಿತು.
ದಾನಕ್ಕೆ ಶ್ರೀ ಮಂತ ಬಡವ ಎಂಬವರ ಬೇಧಭಾವವಿಲ್ಲದೆ ಮಾಡುವ ಏಕೈಕ ದಾನ ರಕ್ತದಾನ , ಅದೊಂದು ಶ್ರೇಷ್ಠ ದಾನವಾಗಿದ್ದು, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ಏನೇ ಇಲ್ಲದಿದ್ದರೂ ರಕ್ತದಾನವೊಂದನ್ನು ಮಾಡುವ ಅಭ್ಯಾಸ ಬೆಳೆಸಿಕೊಂಡರೇ ಆತ ಒಂದು ಜೀವ ಉಳಿಸಿದಷ್ಟೇ ಫಲವಿದೆ ಮತ್ತು ದುಷ್ಚಟ ಮುಕ್ತನಾಗಿ ಬಾಳಿದ ವ್ಯಕ್ತಿಗೆ ಯಾವತ್ತೂ ರಕ್ತ ದಾನ ಮಾಡುವ ಯೋಗವೂ ಇದೆ ಎಂದು ಅರುಣ್ ಕುಮಾರ್ ಪುತ್ತಿಲ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು.
ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಮಾರ್ತ, ಡಾ.ಸತೀಶ್, ಬೆಟ್ಟಂಪಾಡಿ ಪುತ್ತಿಲ ಪರಿವಾರದ ಅಧ್ಯಕ್ಷರಾದ ಸುಜಿತ್ ಕಜೆ, ಬ್ಲಡ್ ಬ್ಯಾಂಕ್ ನ ಡಾ.ರಾಮಚಂದ್ರ ಭಟ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ 44 ಜನ ರಕ್ತದಾನ ಮಾಡಿದರು ಹಾಗೂ ಅಪರೂಪದ ರಕ್ತ ವರ್ಗದವರು ಅಲ್ಲಿ ನೊಂದಾಯಿಸಿಕೊಂಡರು.