Reliance Foundation Scholarships 2023-24: ರಿಲಯನ್ಸ್ ಫೌಂಡೇಶನ್ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವುದು ಹೇಗೆ

Reliance Foundation Scholarships 2023-24: ರಿಲಯನ್ಸ್ ಫೌಂಡೇಶನ್ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವುದು ಹೇಗೆ

ರಿಲಯನ್ಸ್ ಫೌಂಡೇಶನ್ ಸ್ಕಾಲರ್‌ಶಿಪ್ ಪ್ರೋಗ್ರಾಂ

ಉನ್ನತ ಶಿಕ್ಷಣಕ್ಕಾಗಿ ಭಾರತದ ಅತಿದೊಡ್ಡ, ಅಂತರ್ಗತ ಮತ್ತು ವೈವಿಧ್ಯಮಯ ವಿದ್ಯಾರ್ಥಿವೇತನ ಉಪಕ್ರಮಗಳಲ್ಲಿ ಒಂದಾಗಿರುವ ರಿಲಯನ್ಸ್ ಫೌಂಡೇಶನ್ ಸ್ಕಾಲರ್‌ಶಿಪ್ ಪ್ರೋಗ್ರಾಂ, 2023-24ರ ಶೈಕ್ಷಣಿಕ ವರ್ಷಕ್ಕೆ 5,000 ಪದವಿಪೂರ್ವ ವಿದ್ಯಾರ್ಥಿವೇತನವನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. ಎಲ್ಲ ವಿಭಾಗಗಳಲ್ಲಿ ಕಲಿಯುತ್ತಿರುವ ಪದವಿಪೂರ್ವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಹರಾಗಿದ್ದು, ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 15 ಕೊನೇ ದಿನ.

ಯುವಕರ ಶಕ್ತಿ ಮತ್ತು ಸಾಮರ್ಥ್ಯದಲ್ಲಿ ಹೂಡಿಕೆಯ ಪ್ರಾಮುಖ್ಯತೆಯನ್ನು ರಿಲಯನ್ಸ್‌ನ ಸಂಸ್ಥಾಪಕ ಅಧ್ಯಕ್ಷ ಧೀರೂಭಾಯಿ ಅಂಬಾನಿಯವರು ದೃಢವಾಗಿ ಪ್ರತಿಪಾದಿಸಿದ್ದರು. ಅವರ ದೃಷ್ಟಿಕೋನದ ಫಲವೇ ಈ ಸ್ಕಾಲರ್‌ಶಿಪ್‌. ರಿಲಯನ್ಸ್ ಫೌಂಡೇಶನ್‌ ಈ  ಸ್ಕಾಲರ್‌ಶಿಪ್‌ಗಳು ಉನ್ನತ ಶಿಕ್ಷಣಕ್ಕೆ ಯುವಜನರ ಪ್ರವೇಶವನ್ನು  ಬಲಪಡಿಸುವ ಗುರಿಯನ್ನು ಹೊಂದಿವೆ. ರಿಲಯನ್ಸ್ ಫೌಂಡೇಶನ್‌ ಸಂಸ್ಥಾಪಕಿ, ಮುಖ್ಯಸ್ಥೆ ನೀತಾ ಅಂಬಾನಿ ಅವರು ಧೀರೂಭಾಯಿ ಅಂಬಾನಿ ಅವರ 90ನೇ ಜಯಂತಿ ಸಂದರ್ಭದ 2022ರ ಡಿಸೆಂಬರ್‌ನಲ್ಲಿ ಮುಂದಿನ 10 ವರ್ಷ ಕಾಲ 50,000 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡುವ ಬದ್ಧತೆಯನ್ನು ಘೋಷಿಸಿದರು. ಉತ್ತಮ ಭವಿಷ್ಯದ ನಾಳೆಗಳಿಗಾಗಿ ಯುವಜನರನ್ನು ಸಬಲರನ್ನಾಗಿಸುವ ನೀತಾ ಅಂಬಾನಿ ಅವರ ದೃಷ್ಟಿಕೋನದ ಫಲವೂ ಇದಾಗಿದೆ.

ಪದವಿ ಪೂರ್ವ ಕಾಲೇಜು ಶಿಕ್ಷಣವನ್ನು ಆರ್ಥಿಕ ಹೊರೆ ಇಲ್ಲದೆ ಪಡೆಯುವುದಕ್ಕಾಗಿ ರಿಲಯನ್ಸ್ ಫೌಂಡೇಶನ್‌ ಸ್ಕಾಲರ್‌ಶಿಪ್‌ ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳನ್ನು ಮೆರಿಟ್ ಕಮ್ ಮೀನ್ಸ್‌ ಅಂದರೆ ಪ್ರತಿಭೆ ಮತ್ತು ಪರಿಸ್ಥಿತಿ ಮಾನದಂಡಗಳಿಗೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಯಶಸ್ವಿ ವೃತ್ತಿಪರರಾಗಲು ಮತ್ತು ಅವರ ಕನಸುಗಳನ್ನು ನನಸಾಗಿಸಲು, ತಮ್ಮನ್ನು ಮತ್ತು ಅವರ ಸಮುದಾಯಗಳನ್ನು ಎತ್ತುವ ಮತ್ತು ಭಾರತದ ಭವಿಷ್ಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಸಾಮರ್ಥ್ಯವನ್ನು ಅನ್ಲಾಕ್ ಮಾಡಿಕೊಡುವ ಉದ್ದೇಶ ಈ ಸ್ಕಾಲರ್‌ಶಿಪ್‌ನದ್ದು.

ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆ ಭಾರತದಲ್ಲಿದೆ. ನಮ್ಮ ಯುವಜನರು ರಾಷ್ಟ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಅಪಾರ ಸಾಮರ್ಥ್ಯವನ್ನು ಹೊಂದಿದ್ದಾರೆ. ರಿಲಯನ್ಸ್ ಫೌಂಡೇಶನ್‌ನಲ್ಲಿ, ಗುಣಮಟ್ಟದ ಶಿಕ್ಷಣಕ್ಕೆ ಅವಕಾಶ ಮತ್ತು ಪ್ರವೇಶವನ್ನು ಒದಗಿಸಲು ನಾವು ಕೆಲಸ ಮಾಡುತ್ತೇವೆ. ಯುವಜನರು ಅವರ ಆಕಾಂಕ್ಷೆಗಳನ್ನು ಪೂರೈಸಲು ಮತ್ತು ಭಾರತದ ಬೆಳವಣಿಗೆಗೆ ಕೊಡುಗೆ ನೀಡಲು ಅವರಿಗೆ ಸಹಾಯ ಮಾಡಲು ನಾವು ಬಲವಾಗಿ ಬದ್ಧರಾಗಿದ್ದೇವೆ.

 ಜಗನ್ನಾಥ ಕುಮಾರ್, ಸಿಇಒ, ರಿಲಯನ್ಸ್ ಫೌಂಡೇಶನ್.

ಸ್ಕಾಲರ್‌ಶಿಪ್ ಮೊತ್ತ ಎಷ್ಟು, ಅರ್ಹತೆ, ಮಾನದಂಡಗಳೇನು

ರಿಲಯನ್ಸ್ ಫೌಂಡೇಶನ್ ಪದವಿಪೂರ್ವ ವಿದ್ಯಾರ್ಥಿವೇತನ ಕಾರ್ಯಕ್ರಮವು ಆಯ್ದ ವಿದ್ಯಾರ್ಥಿಗಳಿಗೆ ಅವರ ಪೂರ್ಣ ವ್ಯಾಸಂಗಕ್ಕೆಂದು 2 ಲಕ್ಷ ರೂಪಾಯಿವರೆಗಿನ ಅನುದಾನವನ್ನು ನೀಡುತ್ತದೆ. ಅಷ್ಟೇ ಅಲ್ಲದೆ, ವ್ಯಾಸಂಗಕ್ಕಾಗಿ ಸಮಗ್ರ ಅಭಿವೃದ್ಧಿ ಮತ್ತು ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್‌ನೊಂದಿಗೆ ಕೌಶಲ ಅಭಿವೃದ್ಧಿ ಗಳಿಸುವ ಅವಕಾಶ ಪಡೆಯುತ್ತಾರೆ. ಹುಡುಗಿಯರು ಮತ್ತು ವಿಕಲಚೇತನರ ಅರ್ಜಿಗಳನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುತ್ತದೆ. ಆಯ್ಕೆಯು ಸಾಮರ್ಥ್ಯ ಪರೀಕ್ಷೆಯಲ್ಲಿನ ಕಾರ್ಯಕ್ಷಮತೆ, 12 ನೇ ತರಗತಿ ಅಂಕಗಳು, ಮನೆಯ ಆದಾಯ ಮತ್ತು ಇತರ ಅರ್ಹತಾ ಮಾನದಂಡಗಳನ್ನು ಆಧರಿಸಿರುತ್ತದೆ.

ಕಳೆದ ವರ್ಷದ ಸ್ಕಾಲರ್‌ಶಿಪ್‌ಗೆ ಹೀಗಿತ್ತು ಪ್ರತಿಕ್ರಿಯೆ

ರಿಲಯನ್ಸ್ ಫೌಂಡೇಶನ್ ಸ್ನಾತಕಪೂರ್ವ ಸ್ಕಾಲರ್‌ಶಿಪ್ 2022-23ರಲ್ಲಿ, ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಭಾರತದ ಎಲ್ಲಾ ರಾಜ್ಯಗಳಿಂದ 40,000 ಅರ್ಜಿಗಳಲ್ಲಿ 5,000 ವಿದ್ಯಾರ್ಥಿಗಳನ್ನು ಅರ್ಹತೆ ಮತ್ತು ಸಾಮರ್ಥ್ಯ ಪರೀಕ್ಷೆಯಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಇವರಲ್ಲಿ 51 ಪ್ರತಿಶತ ವಿದ್ಯಾರ್ಥಿಗಳು ಮಹಿಳೆಯರು ಮತ್ತು 97 ವಿದ್ಯಾರ್ಥಿಗಳು ವಿಶಿಷ್ಟ ಚೇತನರು. ಆಯ್ಕೆಯಾದವರು 1,630 ಶಿಕ್ಷಣ ಸಂಸ್ಥೆಗಳಿಂದ ಎಲ್ಲಾ ಅಧ್ಯಯನದ ಸ್ಟ್ರೀಮ್‌ಗಳಿಂದ ಪೂರ್ಣ ಸಮಯದ ಪದವಿ ಕೋರ್ಸ್‌ಗಳ ವ್ಯಾಸಂಗ ಮಾಡುತ್ತಿದ್ದಾರೆ.

ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವುದು ಹೇಗೆ

ರಿಲಯನ್ಸ್ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು www.scholarships.reliancefoundation.org ಭೇಟಿ ನೀಡಬೇಕು.

ಸ್ಕಾಲರ್‌ಶಿಪ್ ಹಿನ್ನೆಲೆ ಹೀಗಿದೆ

ದೇಶಾದ್ಯಂತ 1996 ರಿಂದ, ಧೀರೂಭಾಯಿ ಅಂಬಾನಿ ಸ್ಕಾಲರ್‌ಶಿಪ್‌ಗಳು ಮತ್ತು ರಿಲಯನ್ಸ್ ಫೌಂಡೇಶನ್ ಸ್ಕಾಲರ್‌ಶಿಪ್‌ಗಳ ಮೂಲಕ, ರಿಲಯನ್ಸ್ 18,000 ಕ್ಕೂ ಹೆಚ್ಚು ಯುವಜನರಿಗೆ ಪದವಿಪೂರ್ವ ವಿದ್ಯಾರ್ಥಿವೇತನವನ್ನು ವಿತರಿಸಿದೆ. ಅವರಲ್ಲಿ ಅರ್ಧದಷ್ಟು ಮಹಿಳೆಯರು ಮತ್ತು ಸುಮಾರು 2,800 ಜನರು  ವಿಶಿಷ್ಟಚೇತನರು. ಅನೇಕರು ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದ್ದಾರೆ ಮತ್ತು ಭಾರತ ಮತ್ತು ವಿದೇಶಗಳಲ್ಲಿ ತಮ್ಮ ಸಮುದಾಯ ಮತ್ತು ಸಂಸ್ಥೆಗಳಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article