How to apply Skill Development Training: ದಕ್ಷಿಣ ಕನ್ನಡ ಸೇರಿ 5 ಜಿಲ್ಲೆಗಳ ಅಲ್ಪಸಂಖ್ಯಾತ ನಿರುದ್ಯೋಗಿ ಯುವಜನರಿಗೆ ಕೌಶಲ್ಯ ತರಬೇತಿಗಾಗಿ ಅರ್ಜಿ ಆಹ್ವಾನ

How to apply Skill Development Training: ದಕ್ಷಿಣ ಕನ್ನಡ ಸೇರಿ 5 ಜಿಲ್ಲೆಗಳ ಅಲ್ಪಸಂಖ್ಯಾತ ನಿರುದ್ಯೋಗಿ ಯುವಜನರಿಗೆ ಕೌಶಲ್ಯ ತರಬೇತಿಗಾಗಿ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ (ಕೃಪೆ -ಕ್ಯಾನ್ವಾ, ಪಿಕ್ಸೆಲ್ಸ್)
ಬೆಂಗಳೂರು: ರಾಮನಗರ, ದಕ್ಷಿಣಕನ್ನಡ, ಬೆಳಗಾವಿ, ದಾವಣಗೆರೆ, ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಒಳಪಡುವ ವಿದ್ಯಾವಂತ ನಿರುದ್ಯೋಗಿ ಯುವಕ/ ಯುವತಿಯರಿಗೆ ಬೆಂಗಳೂರಿನಲ್ಲಿ ಊಟ ವಸತಿಯೊಂದಿಗೆ ಸಹಾಯಧನ ನೀಡುವ ಮೂಲಕ ಉಚಿತವಾಗಿ 4 ತಿಂಗಳ ವಿವಿಧ ಕ್ಷೇತ್ರಗಳ ಅಲ್ಪಾವಧಿ ಕೌಶಲ್ಯ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ತರಬೇತಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ವತಿಯಿಂದ 2023-24ನೇ ಸಾಲಿನ ಅಲ್ಪಸಂಖ್ಯಾತ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಆಯೋಜಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿದಾರರ ವಯೋಮಿತಿ 16 ರಿಂದ 35 ವರ್ಷದೊಳಗಿರಬೇಕು. ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದವರಾಗಿರಬೇಕು. ಕುಟುಂಬದ ಆದಾಯ ಎಲ್ಲಾ ಮೂಲಗಳಿಂದ 8 ಲಕ್ಷ ರೂಪಾಯಿ ಮೀರಿರಬಾರದು.

ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 16 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ www.dom.karnataka.gov.in ಜಾಲತಾಣ  ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ರಾಮನಗರ ಜಿಲ್ಲಾ ಅಧಿಕಾರಿ ಭಕ್ತ ಮಾರ್ಕಂಡಯ್ಯ ಮೊಬೈಲ್ ಸಂಖ್ಯೆ – 7259306155, ದಕ್ಷಿಣ ಕನ್ನಡ ಜಿಲ್ಲಾ ಅಧಿಕಾರಿ  ಜಿನೇಂದ್ರ ಮೊಬೈಲ್ ಸಂಖ್ಯೆ – 9449006285, ಬೆಳಗಾವಿ ಜಿಲ್ಲಾ ಅಧಿಕಾರಿ  ಮೀರ್ಜಣ್ಣನವರ್ ಮೊಬೈಲ್ ಸಂಖ್ಯೆ –8197705896, ದಾವಣಗೆರೆ ಜಿಲ್ಲಾ ಅಧಿಕಾರಿ ಮಲ್ಲಿಕಾರ್ಜುನ ಮಠದ ಮೊಬೈಲ್ ಸಂಖ್ಯೆ –9886635499, ಕಲಬುರಗಿ ಜಿಲ್ಲಾ ಅಧಿಕಾರಿ  ಜಾವೀದ್ ಕಾರಂಗಿ ಮೊಬೈಲ್ ಸಂಖ್ಯೆ – 9449161217 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರಿನ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article