ರಿಲಯನ್ಸ್ ಇಂಡಸ್ಟ್ರೀಸ್ 2ನೇ ತ್ರೈ,ಮಾಸಿಕ ಒಟ್ಟಾರೆ ನಿವ್ವಳ ಲಾಭ ಶೇ 30 ಹೆಚ್ಚಾಗಿ 19,878 ಕೋಟಿ ರೂಪಾಯಿಗೆ ಏರಿಕೆ

CITIZEN NEWS PUTTUR
By -
0



ಮುಂಬೈರಿಲಯನ್ಸ್ ಇಂಡಸ್ಟ್ರೀಸ್  ಎರಡನೇ ತ್ರೈಮಾಸಿಕದ (2023 ಜುಲೈನಿಂದ ಸೆಪ್ಟೆಂಬರ್ಒಟ್ಟಾರೆ ನಿವ್ವಳ ಲಾಭ 19,878 ಕೋಟಿ ರೂಪಾಯಿ ಶುಕ್ರವಾರದಂದು (ಅ.27) ವರದಿ ಆಗಿದೆಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿ ಗಳಿಸಿದ್ದ ಲಾಭದ ಪ್ರಮಾಣವನ್ನು ಗಮನಿಸಿದರೆ ಶೇ 29.7ರಷ್ಟು ಹೆಚ್ಚಳ ಆಗಿದೆಆದರೆ ಕಂಪನಿಯ ತೈಲದಿಂದ ರಾಸಾಯನಿಕ ವ್ಯವಹಾರದಲ್ಲಿ ಆದಾಯದಲ್ಲಿ ಗಣನೀಯ ಇಳಿಕೆ ಆಗಿದೆ.

 

ರಿಲಯನ್ಸ್ ರೀಟೇಲ್ ನಿವ್ವಳ ಲಾಭದಲ್ಲಿ ಶೇ 21ರಷ್ಟು ಹೆಚ್ಚಳವಾಗಿದ್ದು, 2790 ಕೋಟಿ ರೂಪಾಯಿ ತಲುಪಿದೆಒಟ್ಟಾರೆ ಆದಾಯವು ವರ್ಷದಿಂದ ವರ್ಷಕ್ಕೆ ಶೇ 18.8ರಷ್ಟು ಹೆಚ್ಚಳವಾಗಿ 77,148 ಕೋಟಿ ರೂಪಾಯಿ ಮುಟ್ಟಿದೆಆಫ್ ಲೈನ್ ಹಾಗೂ ಆನ್ ಲೈನ್ ವ್ಯವಹಾರದ ವಿಸ್ತರಣೆಯನ್ನು ಮುಂದುವರಿಸಲಾಗಿದೆ ಎಂದು ರಿಲಯನ್ಸ್ ನಿಂದ ತಿಳಿಸಲಾಗಿದೆ.

 

ರಿಲಯನ್ಸ್ ಆಪರೇಷನ್ಸ್‌ ಆದಾಯ 2.34 ಲಕ್ಷ ಕೋಟಿ ರೂಪಾಯಿ  

 

ರಿಲಯನ್ಸ್ ಜಿಯೋದ ಎರಡನೇ ತ್ರೈ ಮಾಸಿಕ (2023 ಜುಲೈನಿಂದ ಸೆಪ್ಟೆಂಬರ್ಫಲಿತಾಂಶ ಪ್ರಕಟ ಆಗಿದ್ದುಕಳೆದ ತ್ರೈಮಾಸಿಕದಿಂದ  ತ್ರೈಮಾಸಿಕಕ್ಕೆ ನಿವ್ವಳ ಲಾಭವು ಶೇಕಡಾ 4ರಷ್ಟು ಹೆಚ್ಚಾಗಿದ್ದು, 5058 ಕೋಟಿ ರೂಪಾಯಿಯನ್ನು ಮುಟ್ಟಿದೆಇನ್ನು ಜಿಯೋದ ಆದಾಯವು ಶೇಕಡಾ ಮೂರರಷ್ಟು ಮೇಲೇರಿದೆ.

 

ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಜಿಯೋದ ಲಾಭ 4,863 ಕೋಟಿ ರೂಪಾಯಿ ಇತ್ತುಇನ್ನು ಇದೇ ರೀತಿ ವರ್ಷದ ಹಿಂದಿನ ಇದೇ ಅವಧಿಯಲ್ಲಿ ಜಿಯೋದ ಆದಾಯ 22,633 ಕೋಟಿ ರೂಪಾಯಿ ಇತ್ತುಅದು ಈಗ 24,856 ಕೋಟಿ ರೂಪಾಯಿಗೆ ಮೇಲೇರಿದೆ.

 

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್ ಅಂಬಾನಿ ಮಾತನಾಡಿ, "ಎಲ್ಲ ವ್ಯಾಪಾರ ವಿಭಾಗಗಳಿಂದ ಬಲವಾದ ಕಾರ್ಯಾಚರಣೆ ಮತ್ತು ಹಣಕಾಸಿನ ಕೊಡುಗೆಯಿಂದಾಗಿ ರಿಲಯನ್ಸ್ ಮತ್ತೊಂದು ತ್ರೈಮಾಸಿಕ ಬೆಳವಣಿಗೆಯನ್ನು ನೀಡಲು ಸಹಾಯ ಮಾಡಿದೆ,” ಎಂದು ಹೇಳಿದ್ದಾರೆ.

 

ರಿಲಯನ್ಸ್ ಸಿಎಫ್ಒ ಶ್ರೀಕಾಂತ್ ವೆಂಕಟಾಚಾರಿ ಮಾತನಾಡಿ, "ನಾವು ಕತಾರ್ ಇನ್ವೆಸ್ಟ್ ಮೆಂಟ್ ಅಥಾರಿಟಿ (QIA) ಮತ್ತು ಕೆಕೆಆರ್ (KKR)ನಿಂದ ರಿಲಯನ್ಸ್ ರೀಟೇಲ್ ಗೆ ಪಡೆದ ನಿಧಿಯಿಂದ 1.17 ಲಕ್ಷ ಕೋಟಿ ರೂಪಾಯಿಗಳ ನಿವ್ವಳ ಸಾಲ ಕಡಿಮೆಯಾಗಿದೆ,” ಎಂದರು.

 

"5ಜಿ ನೆಟ್ವರ್ಕ್ ಜಾರಿಯು ‌ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿರುವುದರಿಂದ ಬಂಡವಾಳ ಅಗತ್ಯದ ತೀವ್ರತೆಯು ಗಣನೀಯವಾಗಿ ಕುಸಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ,” ಎಂದರು.


 Reliance Industries Q2 Results July-September quarter results for fiscal 2023-24 (Q2FY24), reporting a rise of 27 per cent in consolidated net profit at ₹17,394 crore


Tags:

Post a Comment

0 Comments

Please Select Embedded Mode To show the Comment System.*

#buttons=(Ok, Go it!) #days=(20)

Our website uses cookies to enhance your experience. Check Out
Ok, Go it!