ಪುತ್ತೂರು ಗೋಲೋತ್ಸವ 2024: ಕುರಿಯ ಗ್ರಾಮದ ಸಂಪ್ಯದ ಮೂಲೆಯಲ್ಲಿ ಅದ್ದೂರಿ ಗೋಲೋಕೋತ್ಸವ ಸಂಪನ್ನ

ಪುತ್ತೂರು ಗೋಲೋತ್ಸವ 2024: ಕುರಿಯ ಗ್ರಾಮದ ಸಂಪ್ಯದ ಮೂಲೆಯಲ್ಲಿ ಅದ್ದೂರಿ ಗೋಲೋಕೋತ್ಸವ ಸಂಪನ್ನ

 


ಪುತ್ತೂರು: ಕುರಿಯ ಗ್ರಾಮದ ಸಂಪ್ಯದಮೂಲೆಯಲ್ಲಿ ಗೋಲೋಕೋತ್ಸವ ಅದ್ದೂರಿಯಾಗಿ ನಡೆಯಿತು. ವಿವಿಧ ತಳಿಯ ಗೋವುಗಳು, ದೇಶಿ ಹಸುವಿನ ತ್ಯಾಜ್ಯದ ಉತ್ಪನ್ನಗಳ ಮಾರಾಟ, ಹಾಲಿನ ಉತ್ಪನ್ನಗಳು, ಖಾದ್ಯಗಳು, ಸಿಹಿ ತಿಂಡಿಗಳು ಗೋಲೋಕೋತ್ಸವದಲ್ಲಿ ಜನಮನ ಸೆಳೆದ ವಿಚಾರಗಳು. 

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ದೇವಳದ ಗೋ ಸೇವಾ ಬಳಗ ದೇಶಿ ತಳಿಗಳನ್ನು ಸಂರಕ್ಷಿಸಿ ಪೋಷಿಸುವ ನಿಟ್ಟಿನಲ್ಲಿ ಎರಡು ದಿನಗಳ ಗೋಲೋಕೋತ್ಸವ ಕಾರ್ಯಕ್ರಮವನ್ನು  ಪುತ್ತೂರು ನಗರದಿಂದ 4 ಕಿ.ಮೀ ದೂರದ ಸಂಪ್ಯದ ಮೂಲೆ ಗೋ ವಿಹಾರಧಾಮದಲ್ಲಿ ಆಯೋಜಿಸಲಾಗಿತ್ತು. 

ದೇಸೀ ತಳಿಯ 10 - 15 ಗೋವುಗಳು ಪ್ರದರ್ಶನದಲ್ಲಿದ್ದವು. ಮಲ್ನಾಡು ಗಿಡ್ಡ, ಗಿರ್ ಭಾವನಗರ್, ಪುಂಗನೂರು ಗೋವುಗಳ ಸಾಕಣೆಗೆ ಹೆಚ್ಚಿನ ಒಲವು ಕಂಡುಬಂತು. ಆಹಾರ ಮತ್ತು ಔಷಧದ ನೆಲೆಯಲ್ಲಿ ದೇಶಿ ಹಸು ತಳಿಗಳ ಮಹತ್ವ, ಪಾಲನೆ ಸಹಿತ ಸನಾತನ ಸಂಸ್ಕೃತಿಯೊಂದಿಗೆ ದೇಸೀ ಹಸುಗಳ ಪಾಲನೆ, ಪೋಷಣೆ ಕುರಿತಾಗಿ ಜನ ಜಾಗೃತಿ ಮೂಡಿಸಲಾಯಿತು. 

ಸನಾತನ ಸಂಸ್ಕೃತಿಯ ಪ್ರತೀಕ ದೇಶಿ ಗೋ ಸಂಪತ್ತು ಉಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗೋ ಸೇವಾ ಬಳಗ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ವಿವಿಧ ಸಂಘ ಸಂಸ್ಥೆಗಳು ಸೇರಿ ಗೋ ವಿಹಾರಧಾಮದಲ್ಲಿ ದೇಶಿ ತಳಿ ಗೋವು ಸಂರಕ್ಷಣೆಗಾಗಿ ವಿವಿಧ ಯೋಜನೆ ಹಾಕಿಕೊಳ್ಳಲಾಗುವುದು. ಭವಿಷ್ಯದಲ್ಲಿ 200 ದೇಶಿ ಹಸು ಒಳಗೊಂಡ ಗೋ ಶಾಲೆ ಆರಂಭಿಸಬೇಕೆಂಬ ಆಶಯವಿದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಇದೇ ವೇಳೆ ಹೇಳಿದರು. 

ಗೋಲೋಕೋತ್ಸವದಲ್ಲಿ ಕುದುರೆ ಸವಾರಿ ಕೂಡ ಆಕರ್ಷಣೆಯ ಭಾಗವಾಗಿತ್ತು. ಕೆಎಂಎಫ್ ಉತ್ಪನ್ನಗಳು ಕೂಡ ಗಮನಸೆಳೆದವು. ಗೋಮೂತ್ರದಿಂದ ತಯಾರಿಸಲ್ಪಟ್ಟ ವಿವಿಧ ಕ್ರಿಮಿನಾಶಕಗಳು, ಔಷಧ ಮಳಿಗೆ, ಎತ್ತಿನ ಗಾಣದಿಂದ ಕಬ್ಬಿನ ಹಾಲು, ಎಣ್ಣೆಯನ್ನು ತೆಗೆಯುವುದು ಮತ್ತು ಮಾರಾಟ, ಖಾದ್ಯಮೇಳ, ದೇಶಿ ಆಹಾರ ಮೇಳದ ಪ್ರದರ್ಶನವೂ ಆಕರ್ಷಣೀಯವಾಗಿತ್ತು. ಗೋಲೋಕೋತ್ಸವದಲ್ಲಿ ವೈಯಕ್ತಿಕ ಗೋಪೂಜೆ, ಗೋವಿನ ಆರತಿಗೆ ಅವಕಾಶವಿತ್ತು. 

Puttur Gou Lokotsava 2024 gou lokotsava at gau vihara dham puttur kuriya village 

Ads on article

Advertise in articles 1

advertising articles 2

Advertise under the article