
ಪುತ್ತೂರಿನಲ್ಲಿ ಕಾಣಸಿಕ್ಕಿತು ಡಬಲ್ ಡೆಕ್ಕರ್ ಬಸ್
Monday, February 5, 2024
ಪುತ್ತೂರಿನ ರಸ್ತೆಯಲ್ಲಿ ಡಬಲ್ ಡೆಕ್ಕರ್ ಬಸ್ ಕಾಣಸಿಕ್ಕಿದೆ. ಮುಂಬೈನ ಬೆಸ್ಟ್ ಕಂಪನಿ ಓಡಿಸುತ್ತಿದ್ದ ಹಳೆಯ ಡಬಲ್ ಡೆಕ್ಕರ್ ಬಸ್ ಇದು. ಧರ್ಮಸ್ಥಳದ ವಾಹನ ಮ್ಯೂಸಿಯಂಗೆ ಹೋಗುತ್ತಿದ್ದ ವೇಳೆ, ಇದು ಪುತ್ತೂರು ವ್ಯಾಪ್ತಿಯಲ್ಲಿ ಕಂಡಬಂತು.
ಮುಂಬಯಿನಲ್ಲಿ ಸದ್ಯ ಹೊಸ ಡಬಲ್ ಡೆಕ್ಕರ್ ಬಸ್‌ಗಳು ಸಂಚರಿಸುತ್ತಿದ್ದು ಹಳೆಯ ಮಾಡೆಲ್ ಗಾಡಿಗಳನ್ನು ಬೆಸ್ಟ್ ಕಂಪನಿ ಮೂಲೆಗಿರಿಸಿದೆ. ಈ ಪೈಕಿ ಒಂದು ಬಸ್ ಅನ್ನು ಧರ್ಮಸ್ಥಳದ ವಾಹನ ಮ್ಯೂಸಿಯಂಗೆ ತರಲಾಗಿದೆ.
ಬೆಸ್ಟ್ ಕಂಪನಿಯ ಡಬಲ್ ಡೆಕ್ಕರ್ ಬಸ್‌ನ ಒಳನೋಟ ಹೀಗಿದೆ..
---------------------------------
Mumbai BEST's iconic old double decker bus sent to Dharmasthala seen at Puttur
Puttur News in Kannada, ಪುತ್ತೂರು ಸುದ್ದಿ, ಪುತ್ತೂರು ನಗರ, Manjusha Museum,