ದರ ಏರಿಕೆ ಕಾರಣ ಮದ್ಯ ಸೇವಿಸುವುದು ಬಿಟ್ಟಿದ್ದಾರಾ ಮದ್ಯಪ್ರಿಯರು?; ಅಬಕಾರಿ ಇಲಾಖೆ ಕೊಟ್ಟ ಅಂಕಿ ಅಂಶ ನೀಡಿದೆ ವಸ್ತುಸ್ಥಿತಿ ಚಿತ್ರಣ

ದರ ಏರಿಕೆ ಕಾರಣ ಮದ್ಯ ಸೇವಿಸುವುದು ಬಿಟ್ಟಿದ್ದಾರಾ ಮದ್ಯಪ್ರಿಯರು?; ಅಬಕಾರಿ ಇಲಾಖೆ ಕೊಟ್ಟ ಅಂಕಿ ಅಂಶ ನೀಡಿದೆ ವಸ್ತುಸ್ಥಿತಿ ಚಿತ್ರಣ

Alcohol
ಸಾಂದರ್ಭಿ‍ಕ ಚಿತ್ರ (Pixels)

ಬೆಂಗಳೂರು: ದರ ಏರಿಕೆಯ ಕಾರಣ ಮದ್ಯ ಪ್ರಿಯರು ಮದ್ಯಸೇವನೆ ಕಡಿಮೆ ಮಾಡಿದ್ದಾರೆ. ಮದ್ಯ ಮಾರಾಟ ಇಳಿಕೆಯಾಗಿದೆ. ರಾಜಸ್ವ ಶೇಕಡ 20 ಕಡಿಮೆಯಾಗಿದೆ ಎಂಬಿತ್ಯಾದಿ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆದರೆ ವಸ್ತುಸ್ಥಿತಿ ಬೇರೆಯೇ ಇದೆ ಎಂದು ಕರ್ನಾಟಕ ಅಬಕಾರಿ ಇಲಾಖೆ ಸೋಮವಾರ ಸ್ಪಷ್ಟಪಡಿಸಿದೆ.

ಅಬಕಾರಿ ಇಲಾಖೆ ನೀಡಿರುವ ಅಂಕಿ ಅಂಶ ಪ್ರಕಾರ, 2023-24ನೇ ಸಾಲಿನಲ್ಲಿ ಇಲ್ಲಿಯವರೆಗೆ ಏಪ್ರಿಲ್ 1 ರಿಂದ ಆಗಸ್ಟ್ 25ರವರೆಗೆ 13,515 ಕೋಟಿ ರೂಪಾಯಿ ರಾಜಸ್ವ ಸಂಗ್ರಹಣೆಯಾಗಿದೆ. ಇದು ಆಯವ್ಯಯ ಗುರಿಯ ಶೇ.37.5 ರಷ್ಟು ಸಾಧನೆಯಾಗಿರುತ್ತದೆ. ಅಲ್ಲದೇ ಕಳೆದ ವರ್ಷದ ಇದೇ ಅವಧಿಯಲ್ಲಿ 11,887 ಕೋಟಿ ರೂಪಾಯಿ ರಾಜಸ್ವ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ 1,628 ಕೋಟಿ ರೂಪಾಯಿ ಅಧಿಕವಾಗಿ ರಾಜಸ್ವವನ್ನು ಸಂಗ್ರಹವಾಗಿದ್ದು, ಶೇ.13.7 ರಷ್ಟು ಬೆಳವಣಿಗೆ ಆಗಿದೆ.

2023-24ನೇ ಸಾಲಿಗೆ ಸರ್ಕಾರವು ಅಬಕಾರಿ ಇಲಾಖೆಗೆ 36,000 ಕೋಟಿ ರೂಪಾಯಿ  ಅಬಕಾರಿ ರಾಜಸ್ವ ಗುರಿ ನಿಗದಿಪಡಿಸಿರುತ್ತದೆ. ಜುಲೈ 7 ರಂದು ಮುಖ್ಯಮಂತ್ರಿಗಳು ತಮ್ಮ ಆಯವ್ಯಯ ಭಾಷಣದಲ್ಲಿ ಹೆಚ್ಚುವರಿ ಅಬಕಾರಿ ಸುಂಕವನ್ನು (AED Rates on IML) ಹೆಚ್ಚಿಸುವ ಪ್ರಸ್ತಾಪ ಮಾಡಿದ್ದರು. ಅದರಂತೆ ಜುಲೈ 20 ಕ್ಕೆ ಜಾರಿಗೆ ಬರುವಂತೆ ಮದ್ಯದ ಎಲ್ಲ 18 ಘೋಷಿತ ಬೆಲೆ ಸ್ಲಾಬ್‍ಗಳ ಮೇಲೆ ಶೇ. 20 ರಷ್ಟು ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಿ ಸರ್ಕಾರವು ಆದೇಶಿಸಿದೆ.

ಸಾಮಾನ್ಯವಾಗಿ ಮದ್ಯದ ದರಗಳನ್ನು ಆಯವ್ಯಯ ದಿನದಂದು ಹೆಚ್ಚಳದ ಘೋಷಣೆ ಮಾಡುವುದಾಗಿದ್ದು, ಅದು ನಂತರದ ನಿರ್ದಿಷ್ಟ ದಿನಗಳಲ್ಲಿ ಜಾರಿಗೆ ಬರುತ್ತದೆ. ಸರ್ಕಾರವು 2023ರ ಜುಲೈ 7 ಆಯವ್ಯಯದಲ್ಲಿ ದರಗಳನ್ನು ಘೋಷಣೆ ಮಾಡುವ ದಿನಾಂಕದಿಂದ ಜಾರಿಮಾಡುವ ಜುಲೈ 20ರ ವರೆಗೆ ಅಂದರೆ ತೆರಿಗೆ ಏರಿಕೆಗೂ ಮುನ್ನ ಮದ್ಯ ಮಾರಾಟಗಾರರು ಹೆಚ್ಚು ಮದ್ಯ ಖರೀದಿಸಿ ಮುಂಗಡ ದಾಸ್ತಾನು ಮಾಡಿಕೊಂಡಿದ್ದರು. ಅದನ್ನು ನಂತರದ ದಿನಗಳಲ್ಲಿ ಹೊಸ ದರಗಳಲ್ಲಿ ಮಾರಾಟ ಮಾಡಿರುತ್ತಾರೆ. ಹೀಗೆ ಸನ್ನದುದಾರರು ಕೆಎಸ್‍ಬಿಸಿಎಲ್ ಡಿಪೋಗಳಿಂದ ಮುಂಗಡ ಖರೀದಿ ಮಾಡಿ ದಾಸ್ತಾನು ಮಾಡಿಕೊಂಡಿರುವುದರಿಂದ ಬೆಲೆ ಹೆಚ್ಚಳದ ಜಾರಿ ದಿನಾಂಕದಿಂದ ಮುಂದಿನ ಕೆಲವು ದಿನಗಳವರೆಗೆ ಸನ್ನದುದಾರರು ಹೆಚ್ಚಿನ ಮದ್ಯ ಖರೀದಿ ಮಾಡಿಕೊಳ್ಳುವುದಿಲ್ಲ,ಇದರಿಂದ ಮದ್ಯದ ಮಾರಾಟದಲ್ಲಿ ಕುಸಿತ ಕಂಡು ಬಂದಾಗ್ಯೂ ನಂತರ ದಿನಗಳಲ್ಲಿ ಯಥಾಸ್ಥಿತಿಗೆ ಬಂದಿದೆ ಎಂದು ಇಲಾಖೆ ತಿಳಿಸಿದೆ.

ಯಾವಾಗ ಎಷ್ಟು ಮಾರಾಟ ಆಗಿದೆ..

 ಜುಲೈ 2022 ಹಾಗೂ ಜುಲೈ, 2023 ರಲ್ಲಿ ತುಲನಾತ್ಮಕ ಮದ್ಯ ಮಾರಾಟ ವಿವರ

- ಜುಲೈ 1, 2022 ರಿಂದ ಜುಲೈ 19, 2022 ರವರೆಗೆ ಶೇ.32.6,

- ಜುಲೈ 20 ರಿಂದ ಜುಲೈ 31 ರವರೆಗೆ ಶೇ. 22.83,

- ಒಟ್ಟಾರೆ ಜುಲೈ 2022 ರಲ್ಲಿ ಶೇ. 54.89

- ಜುಲೈ 1, 2023 ರಿಂದ ಜುಲೈ 19, 2023 ರವರೆಗೆ ಶೇ.52.65,

- ಜುಲೈ 20 ರಿಂದ ಜುಲೈ 31 ರವರೆಗೆ ಶೇ. 12.81,

- ಒಟ್ಟಾರೆ ಜುಲೈ 2023 ರಲ್ಲಿ ಶೇ. 65.46


ರೀತಿ ಸನ್ಮದುದಾರರು ಹೆಚ್ಚಿನ ಮದ್ಯದ ದಾಸ್ತಾನು ಮಾಡಿಕೊಂಡಿರುವುದರಿಂದ, ಆಗಸ್ಟ್ 2023 ಮಾಹೆಯಲ್ಲಿ ಶೇ.6 ರಷ್ಟು ಋಣಾತ್ಮಕ ಬೆಳವಣಿಗೆ ಕಂಡುಬಂದಿರುತ್ತದೆ. ಆದರೆ, ಮದ್ಯದ ದರ ಏರಿಕೆಯಿಂದ ರಾಜಸ್ವದ ಸಂಗ್ರಹಣೆಯಲ್ಲಿ ಶೇ.14 ರಷ್ಟು ಬೆಳವಣಿಗೆ ಆಗಿರುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

2022-23
ನೇ ಆರ್ಥಿಕ ಸಾಲಿನಲ್ಲಿ (ದಿನಾಂಕ:01-04-2022 ರಿಂದ 25-08-2022 ರವರೆಗೆ) 271.30 ಲಕ್ಷ ಪೆಟ್ಟಿಗೆಗಳಲ್ಲಿ ಮದ್ಯ ಮಾರಾಟವಾಗಿದ್ದು, 11, 887 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆಯಾಗಿದೆ. 2023-24 ನೇ ಆರ್ಥಿಕ ಸಾಲಿನಲ್ಲಿ 282.80 ಲಕ್ಷ ಪೆಟ್ಟಿಗೆಗಳಲ್ಲಿ ಮದ್ಯ ಮಾರಾಟವಾಗಿದ್ದು, 13,515 ಕೋಟಿ ರೂ. ರಾಜಸ್ವ ಸಂಗ್ರಹಣೆಯಾಗಿದೆ.

ಒಟ್ಟಾರೆ 2023-24 ಸಾಲಿನಲ್ಲಿ ಇಲ್ಲಿಯವರೆಗೆ ಮಾಹಿತಿಯನ್ನು ವಿಶ್ಲೇಷಿಸಿದಾಗ, ಮದ್ಯ ಮಾರಾಟದಲ್ಲಿ ಶೇ.4.24 ಬೆಳವಣಿಗೆ ಹೆಚ್ಚಳವಾಗಿದ್ದು, ಮೂಲಕ ರಾಜಸ್ವÀ ಸಂಗ್ರಹಣೆಯಲ್ಲೂ ಸಹ 1628 ಕೋಟಿ ರೂಪಾಯಿ ಹೆಚ್ಚಿನ ರಾಜಸ್ವ ಸಂಗ್ರಹವಾಗಿದ್ದು, ಶೇ.13.7 ರಷ್ಟು ಬೆಳವಣಿಗೆಯನ್ನು ಸಾಧಿಸಲಾಗಿರುತ್ತದೆ.

ಪ್ರತಿ ವರ್ಷದ ಮದ್ಯದ ದರಗಳನ್ನು ಏರಿಸುವಾಗ ಇದೇ ಪ್ರವೃತ್ತಿಯು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಮಾರಾಟವು ವಾಡಿಕೆಯಂತೆ ಯಥಾಸ್ಥಿತಿಗೆ ಬರುತ್ತದೆ. ಇದರಿಂದ ಮದ್ಯದ ದರಗಳನ್ನು ಹೆಚ್ಚಳ ಮಾಡುವ ಸಂದರ್ಭಗಳಲ್ಲಿ ಕೇವಲ ಒಂದು ನಿರ್ದಿಷ್ಟ ಅವಧಿಗೆ ಹೋಲಿಸಿದರೆ ಮದ್ಯ ಮಾರಾಟದ ಕುಸಿತವಾಗಿರುವ ಬಗ್ಗೆ ಅಂದಾಜಿಸುವುದು ಸರಿಯಾದ ಕ್ರಮವಲ್ಲ. ಮುಂದಿನ ದಿನಗಳಲ್ಲಿ ಮದ್ಯ ಮಾರಾಟ ಮತ್ತು ಅಬಕಾರಿ ರಾಜಸ್ವ ಸಂಗ್ರಹಣೆಯು ಯಥಾಸ್ಥಿತಿಗೆ ಬರುವುದಲ್ಲದೆ, ಸರ್ಕಾರವು ನಿಗದಿಪಡಿಸಿರುವ ರೂ. 36,000 ಕೋಟಿಗಳ ಅಬಕಾರಿ ರಾಜಸ್ವ ಗುರಿಗೆ ಶೇ.100 ರಷ್ಟು ಸಾಧಿಸಲು ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಇಲಾಖೆಯು ಸ್ಪಷ್ಠಪಡಿಸಿದೆ.

 


Ads on article

Advertise in articles 1

advertising articles 2

Advertise under the article