
ಬೆಂಗಳೂರು ಉಪಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆ.31ರಂದು ಉದ್ಯೋಗ ಮೇಳ ನೇರ ಸಂದರ್ಶನ
Monday, August 28, 2023
![]() |
ನೇರ ಸಂದರ್ಶನ (ಸಾಂದರ್ಭಿಕ ಚಿತ್ರ, ಚಿತ್ರಕೃಪೆ- Pixels) |
ಬೆಂಗಳೂರು: ಬೆಂಗಳೂರು ಕೆ.ಜಿ.ರಸ್ತೆಯಲ್ಲಿರುವ ಉಪಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿಯು ಆಗಸ್ಟ್ 31 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದ್ದು, ವಿವಿಧ ಕಂಪನಿ ಹಾಗೂ ಸಂಸ್ಥೆಗಳು ಭಾಗವಹಿಸಿ ತಮ್ಮಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ ಹಾಗೂ ಪದವಿ (ಬಿಎ, ಬಿ.ಕಾಂ, ಬಿಎಸ್ಸಿ, ಬಿಬಿಎ, ಬಿಸಿಎ, ಬಿಬಿಎಂ) ವಿದ್ಯಾರ್ಹತೆ ಹೊಂದಿರುವ 35 ವರ್ಷಗಳ ವಯೋಮಿತಿ ಒಳಗಿರುವ ಅಭ್ಯಥಿಗಳು ಈ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿರುತ್ತದೆ. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು ಮತ್ತು ಅನುಭವ ಪ್ರಮಾಣಪತ್ರ (ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ ವಿವರಗಳ ಪ್ರತಿಗಳೊಂದಿಗೆ ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿ, ಏಷ್ಯಾಟಿಕ್ ಕಟ್ಟಡ (ಜನತಾ ಬಜಾರ್), ಕೆ.ಜಿ.ರಸ್ತೆ, ಬೆಂಗಳೂರು ಇಲ್ಲಿ ಹಾಜರಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಖುದ್ದು ಕಚೇರಿಗೆ ಭೇಟಿ ನೀಡಿ ಅಥವಾ ದೂರವಾಣಿ ಸಂಖ್ಯೆ: 080-22374582/8310960536 ಮೂಲಕ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ ಎಂದು ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.