ಬೆಂಗಳೂರು: ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು, ಉತ್ತಮ ಗುಣಮಟ್ಟವಲ್ಲದ ಔಷಧಿ ಹಾಗೂ ಕಾಂತಿವರ್ಧಕಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದ್ದಾರೆ.
ಉತ್ತಮ ಗುಣಮಟ್ಟವಲ್ಲದ ಔಷಧಿಗಳಿವು..
- ಮೆ.ಕಾಸ್‍ಮಾಸ್ ಫಾರ್ಮಾಕಲ್ಸ್ ಲಿಮಿಟೆಡ್‍ನ ಕ್ಲೋಫಿಪರ್ - ಸಿವಿ ಟ್ಯಾಬ್ಲೆಟ್ಸ್,
- ಮೆ.ಸನ್‍ಲೈಪ್ ಸೈನ್ಸ್‍ನ ಪ್ಯಾಂಟೋಜಡ್ -40 ಟ್ಯಾಬ್ಲೆಟ್ಸ್,
- ಮೆ. ಟಿ & ಜಿ ಮೆಡಿಕೇರ್‍ನ ಮೆಪ್ರೋ –ಡಿ ಕ್ಯಾಪ್ಸೂಲ್ಸ್ ಐಪಿ,
- ಮೆ.ವೆರಾಕ್ಸ್ ಲೈಫ್ ಸೈನ್ಸಸ್ ಪ್ರೈ.ಲಿಮಿಟೆಡ್‍ನ ಡೋಮ್ಜ್ ಕ್ಯಾಪ್ಸೂಲ್ಸ್,
- ಮೆ. ಅಕ್ಯೂರಾ ಕೇರ್ ಫಾರ್ಮಾಸ್ಯೂಟಿಕಲ್ಸ್ ಪ್ರೈ.ಲಿಮಿಟೆಡ್‍ನ ವೆಥ್ರಿನ್ ಲೋಷನ್,
- ಮೆ.ಇನ್‍ಸ್ಟಂಟ್ ರೆಮಿಡೀಸ್ ಪ್ರೈ.ಲಿಮಿಟೆಡ್‍ನ ಮಾಮಾಫೋಲ್- ಎಕ್ಸ್‍ಟಿ ಟ್ಯಾಬ್ಲೆಟ್ಸ್,
- ಮೆ.ರೆಜೆನಿಕ್ಸ್ ಡ್ರಗ್ಸ್ ಲಿಮಿಟೆಡ್‍ನ ಟೆಲ್ಮಿ – ಎಎಂ ಟ್ಯಾಬ್ಲೆಟ್ಸ್,
- ಮೆ.ಝೆನಾನ್ ಲೈಪ್‍ಸೈನ್ಸಸ್‍ಪ್ರೈ.ಲಿಮಿಟೆಡ್‍ನ ಅಕೋಸ್ಟಾ-ಪಿ ಟ್ಯಾಬ್ಲೆಟ್ಸ್,
- ಮೆ.ವೆಲ್ಲಿಂಟನ್ ಹೆಲ್ತ್‍ಕೇರ್‍ನ ಸೆಫೈಡ್ 1ಜಿ ಇನ್‍ಜೆಕ್ಷನ್,
- ಮೆ.ಯಕ್ಕಾ ಲೈಪ್ ಸೈನ್ಸಸ್ ಪ್ರೈ.ಲಿಮಿಟೆಡ್‍ನ ಸೆಟಿಸ್ಯಾಡ್ ಸಿರಪ್ ಐಪಿ,
- ಮೆ.ಹರ್ಬ್ ಎಡ್ಜ್ ಹೆಲ್ತ್‍ಕೇರ್ ಪ್ರೈ.ಲಿಮಿಟೆಡ್‍ನ ಲೊಮೊಫೆಕ್ಸ್ ಹೆಚ್ ಟ್ಯಾಬ್ಲೆಟ್ಸ್,
- ಮೆ.ಎನ್‍ಜಿಎಸ್ ಪಾರ್‍ಮುಲೇಷನ್ ಪ್ರೈ.ಲಿಮಿಟೆಡ್‍ನ ಫೈರಿಫಾಸ್ಟ್ – 125 ಟ್ಯಾಬ್ಲೆಟ್ಸ್,
- ಮೆ. ಅಲ್ಟ್ರಾ ಡ್ರಗ್ಸ್ ಪ್ರೈ.ಲಿಮಿಟೆಡ್‍ನ ಝೋನೋಫ್ಲಕ್ಸ್ - ಫ್ಲಸ್ ಟ್ಯಾಬ್ಲೆಟ್ಸ್,
- ಮೆ.ಕೆಫ್ನಿಕ್ ಪಾರ್ಮಾಸಿಟಿಕಲ್ಸ್‍ನ ಓಪ್ಲೋಸೈನ್ – ಓಜ್ಡ್ ಟ್ಯಾಬ್ಲೆಟ್,
- ಮೆ.ವೆಲ್‍ಮೆಡ್ ಫಾರ್ಮಾನ ಫ್ಲೋರ್ನಿ – ಓಜ್ಡ್ ಟ್ಯಾಬ್ಲೆಟ್,
- ಮೆ.ಮೇಯೊಫೋರ್ಡ್ ಫಾರ್ಮ್‍ನ ಜಿಂದಾಲ್- ಎಸ್‍ಪಿ ಟ್ಯಾಬ್ಲೆಟ್ಸ್
- ಮೆ.ಗೋ-ಇಶ್ ರೆಮಿಡಿಸ್ ಲಿಮಿಟೆಡ್ ನ ಮೋರ್‍ಪಿಕ್ಸ್-100 ಟ್ಯಾಬ್ಲೆಟ್ಸ್
ಈ ಮೇಲ್ಕಂಡ ಔಷಧಿಗಳನ್ನು / ಕಾಂತಿವರ್ಧಕ ಔಷಧಿ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂ ನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಯಾರಾದರೂ ಇಂತಹ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವುದು ಸಾರ್ವಜನಿಕರು ಈ ಔಷಧಿಗಳನ್ನು / ಕಾಂತಿವರ್ಧಕಗಳನ್ನು ಉಪಯೋಗಿಸಬಾರದೆಂದು ಔಷಧ ನಿಯಂತ್ರಣ ಇಲಾಖೆ (080 2226 2846)ಯ ಔಷಧಿ ನಿಯಂತ್ರಕರಾದ ಭಾಗೋಜಿ ಟಿ. ಖಾನಾಪುರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.