ಮುಂಜಾನೆ ಎದ್ದಾಕ್ಷಣ ಪಠಿಸಬಹುದಾದ ಮಂತ್ರಗಳು
ಮಂತ್ರಗಳ ಪಠಣವು ಮಾನಸಿಕ ಶಾಂತಿಯನ್ನು ನೀಡುವುದು ಮಾತ್ರವಲ್ಲದೇ, ಇಂದ್ರೀಯಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.ಮುಂಜಾನೆ ಎದ್ದಾಕ್ಷಣ ಈ ಕೆಳಕಂಡ ಮಂತ್ರಗಳನ್ನು ಪಠಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.
1. ಮೊದಲನೇ ಮಂತ್ರ
ಕರಾಗ್ರೆ ವಸತಿ ಲಕ್ಷ್ಮಿಃ ಕರ ಮಧ್ಯೆ ಸರಸ್ವತಿ|
ಕರ ಮೂಲೇ ತು ಗೋವಿಂದ ಪ್ರಭಾತೇ ಪ್ರಭಾತೇ ಕರ ದರ್ಶನಂ||
ಅರ್ಥ: ಪ್ರತಿದಿನ ಬೆಳಿಗ್ಗೆ ಕಣ್ಣು ತೆರೆದ ತಕ್ಷಣ ಅಂಗೈಗಳನ್ನು ನೋಡಿ ಮೊದಲು ಈ ಮಂತ್ರವನ್ನು ಪಠಿಸಿ.ಕೈಗಳ ಮುಂಭಾಗದಲ್ಲಿ ಲಕ್ಷ್ಮಿ, ಮಧ್ಯದಲ್ಲಿ ಸರಸ್ವತಿ ದೇವಿ ಮತ್ತು ಹಸ್ತಗಳ ಮೂಲದಲ್ಲಿ ಗೋವಿಂದನು ನೆಲೆಸಿದ್ದಾನೆ ಎಂಬುದು ಇದರ ಅರ್ಥವಾಗಿದೆ. ಇದು ಲಕ್ಷ್ಮಿ ದೇವಿಯ ಜೊತೆಗೆ ಸರಸ್ವತಿ ದೇವಿ ಮತ್ತು ಬ್ರಹ್ಮ ದೇವನ ಆಶೀರ್ವಾದವನ್ನು ನೀಡುತ್ತದೆ.
2. ಎರಡನೇ ಮಂತ್ರ
ಸಮುದ್ರವಸನೇ ದೇವಿ ಪರ್ವತಸ್ಥನಮಂಡಲೇ,
ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶ ಕ್ಷಮಸ್ವ ಮೇಂ
ಅರ್ಥ:ಭೂಮಿ ಪ್ರತಿದಿನವೂ ಸಣ್ಣ ಮತ್ತು ದೊಡ್ಡ ಹೊರೆಗಳ ಭಾರವನ್ನು ಹೊತ್ತುಕೊಳ್ಳುತ್ತದೆ. ಭೂಮಿಯಿಂದ ಆಹಾರ ಧಾನ್ಯಗಳು,ನೀರು ಮುಂತಾದ ಅನೇಕ ವಸ್ತುಗಳನ್ನು ಮನುಷ್ಯನು ಪಡೆಯುತ್ತಾನೆ. ಬೆಳಿಗ್ಗೆ ಬೇಗ ಎದ್ದು ಈ ಮಂತ್ರವನ್ನು ಪಠಿಸುತ್ತಾ ಭೂಮಿವಂದನೆ ಮಾಡಿ. ಇದರಿಂದ ಆಹಾರ ಮತ್ತು ಹಣದ ಕೊರತೆ ಎಂದಿಗೂ ಇರುವುದಿಲ್ಲ.
3. ಮೂರನೇ ಮಂತ್ರ
ಸರ್ವಬಾಧಾವಿನಿರ್ಮುಕ್ತೋ ಧನ ಧಾನ್ಯಸುತಾನ್ವತಃ
ಮಾನುಷ್ಯೋ ಮತ್ಪ್ರಸಾದೇನ್ ಭವಿಷ್ಯತ್ ಸಂಶಯಃ
ಅರ್ಥ: ಮಾತೆಯ ಆಶೀರ್ವಾದದಿಂದ ಮನುಷ್ಯನು ಎಲ್ಲಾ ಅಡೆತಡೆಗಳಿಂದ ಮುಕ್ತನಾಗುತ್ತಾನೆ.ಸಂಪತ್ತು, ಧಾನ್ಯಗಳು ಮತ್ತು ಮಕ್ಕಳನ್ನು ಹೊಂದುತ್ತಾನೆ,ಅದರಲ್ಲಿ ಯಾವುದೇ ಸಂದೇಹವಿಲ್ಲ.
4. ನಾಲ್ಕನೇ ಮಂತ್ರ
ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ
ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೇ
ಅರ್ಥ:ಈ ಮಂತ್ರವನ್ನು ಶಕ್ತಿ ದೇವಿಗೆ ಅಂದರೆ ದುರ್ಗಾ ದೇವಿಗೆ ಸಮರ್ಪಿಸಲಾಗಿದೆ.ಈ ಮಂತ್ರವನ್ನು ಪಠಿಸುವುದರಿಂದ, ಒಬ್ಬ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತಾನೆ. ಇದರ ಅರ್ಥ,"ಗೌರಿ ದೇವಿಯು ಎಲ್ಲರಿಗೂ ಒಳಿತನ್ನು ಮತ್ತು ಕಲ್ಯಾಣವನ್ನು ಮಾಡುತ್ತಾಳೆ." ಅವಳು ಜೀವನದ ರಕ್ಷಕಿ. ಆಕೆಯ ಆಶ್ರಯಕ್ಕೆ ಬರುವ ಮೂಲಕ ಎಲ್ಲರ ಇಷ್ಟಾರ್ಥಗಳು ಈಡೇರುತ್ತವೆ.
ನಿತ್ಯವೂ ಮುಂಜಾನೆ ಎದ್ದಾಕ್ಷಣ ಈ ನಾಲ್ಕು ಮಂತ್ರಗಳನ್ನು ಪಠಿಸುವುದರಿಂದ ಜೀವನದ ಪ್ರತಿಯೊಂದು ಸಮಸ್ಯೆಗಳು ದೂರಾಗುತ್ತದೆ ಎನ್ನುವ ನಂಬಿಕೆ ಇದೆ.ಈ ಮಂತ್ರಗಳು ನಮಗೆ ಲಕ್ಷ್ಮಿ ದೇವಿ,ಭೂದೇವಿ,ದುರ್ಗಾ ದೇವಿ ಹಾಗೂ ಶಿವ ಮತ್ತು ವಿಷ್ಣುವಿನ ಅನುಗ್ರಹವನ್ನು ಕರುಣಿಸುತ್ತದೆ ಎನ್ನಲಾಗುತ್ತದೆ.