ಕರ್ನಾಟಕ ದ್ವಿತೀಯ ಪಿಯು 2024 ಫಲಿತಾಂಶ ಏಪ್ರಿಲ್ 10ಕ್ಕೆ; ರಿಸಲ್ಟ್ ನೋಡುವುದು ಹೇಗೆ

ಕರ್ನಾಟಕ ದ್ವಿತೀಯ ಪಿಯು 2024 ಫಲಿತಾಂಶ ಏಪ್ರಿಲ್ 10ಕ್ಕೆ; ರಿಸಲ್ಟ್ ನೋಡುವುದು ಹೇಗೆ

ಕರ್ನಾಟಕ ದ್ವಿತೀಯ ಪಿಯು 2024 ಫಲಿತಾಂಶ ಏಪ್ರಿಲ್ 10ಕ್ಕೆ; ರಿಸಲ್ಟ್ ನೋಡುವುದು ಹೇಗೆ 

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಪ್ರಿ-ಯೂನಿವರ್ಸಿಟಿ ಪರೀಕ್ಷೆ (PUC) II ಫಲಿತಾಂಶಗಳು ಏಪ್ರಿಲ್ 10 ರಂದು ಬೆಳಗ್ಗೆ ಪ್ರಕಟವಾಗುವ ನಿರೀಕ್ಷೆ ಇದೆ. ಸದ್ಯದ ಮಾಹಿತಿ ಪ್ರಕಾರ,  ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಯಲಿದೆ. ಅದಾಗಿ 11 ಗಂಟೆಗೆ ನಿಗದಿತ ಫಲಿತಾಂಶಗಳ ವೆಬ್‌ಸೈಟ್‌ನಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗ ಸೇರಿ ಎಲ್ಲ ವಿಭಾಗಗಳ ಫಲಿತಾಂಶ ಏಕಕಾಲದಲ್ಲಿ ಲಭ್ಯವಾಗಲಿದೆ. 

ಮಾರ್ಚ್ 1 ರಿಂದ ಮಾರ್ಚ್ 22 ರ ನಡುವೆ ದ್ವಿತೀಯ ಪಿಯು ಪರೀಕ್ಷೆಯನ್ನು ನಡೆಸಲಾಗಿತ್ತು. ದ್ವಿತೀಯ ಪಿಯು ಪರೀಕ್ಷೆಗೆ 6.9 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರಲ್ಲಿ 3.3 ಲಕ್ಷ ವಿದ್ಯಾರ್ಥಿಗಳು ಹುಡುಗರು ಮತ್ತು ಉಳಿದ 3.6 ಲಕ್ಷ ವಿದ್ಯಾರ್ಥಿಗಳು ಹುಡುಗಿಯರು. ಕುತೂಹಲಕಾರಿ ವಿಚಾರ ಎಂದರೆ, ಈ ವರ್ಷ ಪಿಯುಸಿ ದ್ವಿತೀಯ ಪರೀಕ್ಷೆಗಳನ್ನು ಮೂರು ಭಾಗಗಳಲ್ಲಿ ನಡೆಸಲಾಗುತ್ತಿದೆ. ಫಲಿತಾಂಶ ಸುಧಾರಣೆಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ ಎರಡು ಪರೀಕ್ಷೆಗಳನ್ನು ಮಂಡಳಿ ನಡೆಸುತ್ತಿದೆ. 

ಕರ್ನಾಟಕ ದ್ವಿತೀಯ ಪಿಯು ಫಲಿತಾಂಶವನ್ನು ಎಲ್ಲಿ ಹೇಗೆ ನೋಡುವುದು

 
ಕರ್ನಾಟಕ ದ್ವಿತೀಯ ಪಿಯು ಫಲಿತಾಂಶಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಎರಡು ವೆಬ್‌ಸೈಟ್‌ಗಳಲ್ಲಿ (karresults.nic.in ಮತ್ತು pue.kar.nic.in. ) ಬಿಡುಗಡೆ ಮಾಡುತ್ತದೆ. ಈ ಫಲಿತಾಂಶ ನೋಡಿದ ಬಳಿಕ, ಈ ವೆಬ್‌ಸೈಟ್‌ಗಳಿಂದ ತಾತ್ಕಾಲಿಕ ಮಾರ್ಕ್‌ಶೀಟ್ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ-

ಹಂತ 1: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಾದ  karresults.nic.in ಅಥವಾ pue.kar.nic ಗೆ ಹೋಗಬೇಕು. 
ಹಂತ 2: ವೆಬ್​ಸೈಟ್​​ನ ಮುಖಪುಟದಲ್ಲಿ KSEAB PUC ರಿಸಲ್ಟ್‌ 2024 ರ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ನಿಮ್ಮ ಲಾಗಿನ್ ಕ್ರೆಡೆನ್ಶಿಯಲ್ಸ್ ನಮೂದಿಸಿ. ರೋಲ್ ನಂಬರ್ ನಮೂದಿಸಿ.
ಹಂತ 4: ಕರ್ನಾಟಕ ದ್ವಿತೀಯ ಪಿಯು ಫಲಿತಾಂಶ 2024 ಎಂಬ ಸಂದೇಶ ಸ್ಕ್ರೀನ್​​ ಮೇಲೆ ಕಾಣಿಸುತ್ತದೆ.
ಹಂತ 5: ಸ್ಕೋರ್‌ಕಾರ್ಡ್ ವೀಕ್ಷಿಸಿ, ಭವಿಷ್ಯದ ಅಗತ್ಯಗಳಿಗಾಗಿ ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದು ಇಟ್ಟುಕೊಳ್ಳಿ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಒದಗಿಸಿರುವ ಮಾಹಿತಿಯ ಪ್ರಕಾರ, ಕಳೆದ ವರ್ಷ (2023) ದ್ವಿತೀಯ ಪಿಯು ಪರೀಕ್ಷೆಗೆ 7,27,923 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ7,02,067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.

Ads on article

Advertise in articles 1

advertising articles 2

Advertise under the article